Index   ವಚನ - 120    Search  
 
ಪಟ್ಟಣ ಪಾಳೆಯದೊಳಗೆ ವ್ಯವಹರಿಸುತ್ತಿಪ್ಪ ಸೆಟ್ಟಿಕಾರಿತಿಗೆ ಒಬ್ಬ ಹುಟ್ಟುಗುರುಡ ಗಂಡನಾಗಿಪ್ಪನು ನೋಡಾ. ಪಟ್ಟಣ ಬೆಂದು, ಪಾಳಯವಳಿದು, ಸೆಟ್ಟಕಾತಿಯ ಮನವಾರ್ತೆ ಕೆಟ್ಟು, ಹುಟ್ಟುಗುರುಡಂಗೆ ಕಣ್ಣು ಬಂದಲ್ಲದೆ ಮುಂದಣ ಬಟ್ಟೆ ಯಾರಿಗೂ ಕಾಣಬಾರದು ನೋಡಾ. ಸೂಕ್ಷ್ಮ ಶಿವಪಥದ ಹಾದಿ ಎಲ್ಲರಿಗೆ ಸಾಧ್ಯವೇ? ಸಾಧ್ಯವಲ್ಲ ಕಾಣಾ ಶಿವಜ್ಞಾನ ಸಂಪನ್ನಂಗಲ್ಲದೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.