Index   ವಚನ - 121    Search  
 
ನೆಲ್ಲುದ್ದ ಮರನನೇರಿ ಇಳಿಯಲರಿಯದೆ ತ್ರೈಜಗವೆಲ್ಲಾ ತಲ್ಲಣಿಸುತ್ತಿದೆ ನೋಡಾ. ಅಲ್ಲಿಯ ಫಲವ ಬಯಸಿದ ಹಿರಿಯರೆಲ್ಲ ಹಳ್ಳದಲ್ಲಿ ಕೆಡೆದರೆ ಇದ ಕಂಡು ಹೇಸಿ, ಕಡೆಗೆ ತೊಲಗಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.