Index   ವಚನ - 123    Search  
 
ಅಜ ಹರಿ ಸುರ ಮನು ಮುನಿಗಳ ಮರುಳುಮಾಡಿ ಕಾಡಿತ್ತೀ ಮಾಯೆ. ಪತಿವ್ರತೆಯೆಂಬುವರ ಪರಿಯಟಣಗೊಳಿಸಿತ್ತೀ ಮಾಯೆ. ಯತಿಗಳೆಂಬವರ ಎದೆಯೆದೆಯನೊದೆದಿತ್ತೀ ಮಾಯೆ. ಸಚರಾಚರಂಗಳನೆಲ್ಲವ ಜನನ ಮರಣಗಳೆಂಬ ಅಣಲೊಳಗಿಕ್ಕಿ ಆಗಿದಗಿದು ಉಗಿಯಿತ್ತು ನೋಡಾ ಮಾಯೆ. ನಿಮ್ಮ ಶರಣರಲ್ಲದವರ ಕೊಂದು ಕೂಗಿಸಿತ್ತು ನೋಡಾ ಈ ಮಾಯೆ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ,