Index   ವಚನ - 124    Search  
 
ಕರಣಂಗಳೆಂಬ ಕತ್ತಲೆಗವಿದು ಕಾಮುಕಾತುರದಿಂ ವಿಷಯಾಂಬುಧಿಯೊಳಗೆ ಮುಳುಗಿ ಯತೀಶ್ವರರು ಯತೀಶ್ವರರು ಎಂದು ಹಿತಗೆಟ್ಟು ನುಡಿದುಕೊಂಡು ನಡೆವ ಮತಿಹೀನ ಮಾನವರನೇನೆಂಬೆ ಶಿವನೇ? ಈಶ್ವರ ಶರಣಂಗೆ ವಿಕಾರ ಹೊದ್ದಿದಡೆ ಮೀಸಲ, ನಾಯಿ ಮುಟ್ಟಿದಂತಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.