Index   ವಚನ - 125    Search  
 
ಕಟ್ಟರಸನ ಬಂದು ಕಳ್ಳರು ಮುತ್ತಲು, ಪಟ್ಟಣ ಬೆದರಿತ್ತು ನೋಡಾ. ಪಟ್ಟಣದ ತಳವಾರರು ದುಷ್ಟರನೆಬ್ಬಟ್ಟಲು ಬೆದರಿಕೆ ಬಿಟ್ಟೋಡಿತ್ತು ನೋಡಾ. ಕಾಯಪಟ್ಟಣದ ಕಳವಳವಡಗಿತ್ತು. ಇದನೇನೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.