Index   ವಚನ - 132    Search  
 
ಅಹಂಕಾರಭಾವ, ಅವಿದ್ಯಾಭಾವ, ಜ್ಞಾನಾಜ್ಞಾನಭಾವ, ಜ್ಞಾನ ವಿಕೃತಿಭಾವ ವರ್ತನ ವಿಕೃತಿಭಾವ, ಮೋಹನ ವಿಕೃತಿಭಾವ ಎಂಬ ಭ್ರಾಂತಿ ಭಾವವ ಮಾಣಿಸಯ್ಯ. ಇಂದ್ರಿಯ ಭಾವ, ವಿಷಯ ಭಾವ ಭೂತ ಭಾವ, ಕರಣ ಭಾವ ವಿಶ್ವತೈಜಸ ಪ್ರಾಜ್ಞ[ವೆ] ಂಬ ಜೀವಭಾವದ ಭ್ರಮೆಯ ಕಳೆಯಯ್ಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.