Index   ವಚನ - 133    Search  
 
ತನು ನಿನಗನ್ಯವೆಂದರಿಯದೆ, ತನು ನಿನ್ನದೆಂಬೆ; ಮನ ನಿನಗನ್ಯವೆಂದರಿಯದೆ, ಮನ ನಿನ್ನದೆಂಬೆ; ಧನ ನಿನಗನ್ಯವೆಂದರಿಯದೆ, ಧನ ನಿನ್ನದೆಂಬೆ; ಸ್ಥೂಲ ಸೂಕ್ಷ್ಮ ಕಾರಣವೆಂದೆಂಬ ತನುತ್ರಯ ನೀನಲ್ಲ; ಮನ ಮನನ ಮಾನನೀಯವೆಂದೆಂಬ ಮನತ್ರಯ ನೀನಲ್ಲ; ಧನ ಮಮಕಾರ ಸಂಗ್ರಹವೆಂಬ ಕಾರ್ಮಿಕತ್ರಯ ನೀನಲ್ಲ; ಇವು ಒಂದೂ ನೀನಲ್ಲ; ನೀನಾರೆಂದಡೆ: ನೀನು ಸಚ್ಚಿದಾನಂದ ಸ್ವರೂಪವಪ್ಪ ಶಿವತತ್ವವೇ ನೀನೆಂದು ತಿಳಿದು ನೋಡಾ, ಉಳಿದವೆಲ್ಲಾ ಹುಸಿಯೆನ್ನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.