Index   ವಚನ - 156    Search  
 
ಐವರ ಮುಖದಲ್ಲಿ ಆರುಮಂದಿ ಹುಟ್ಟಿ ಎಲ್ಲರಿಗೆ ಕೈಯಾಗಿಪ್ಪರು ನೋಡಾ. ಹಲವರ ಕೈಯೊಳಗಿಪ್ಪ ಒಬ್ಬ ಚಾಂಡಾಲಗಿತ್ತಿ ಮೂರು ಮುಖದಲ್ಲಿ ಆರೂಢರ ನುಂಗಿದಳು ನೋಡಾ. ಹಲವು ಕೈಗಳ ಹಾರಹೊಯಿದು ಮೂರು ಮುಖದಂಗನೆಯರ ಶಿರವ ನೆರೆ ಮೆಟ್ಟಿ ನಿಲ್ಲಬಲ್ಲರೆ ಆತನು ನಿರ್ಮಾಯನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.