ಒಳಹೊರೆಗೆಂಬ ಉಭಯ ಸಂದೇಹದಿಂದ
ಗುರುಶಿಷ್ಯರೆಂದು ನುಡಿದುಕೊಂಡು ನಡೆಯಬೇಕಾಯಿತಲ್ಲದೆ,
ಒಳ ಹೊರಗೆಂಬ ಉಭಯ ಸಂದೇಹವಳಿದು
ಜೀವ ಪರಮರೆಂದೆಂಬ ಉಭಯವು
ಪರಮನೊಬ್ಬನೇಯೆಂದು ತಿಳಿದರೆ,
ಗುರುವೇ ಶಿಷ್ಯ; ಶಿಷ್ಯನೇ ಗುರುವಾದುದನೇನೆಂಬೆನಯ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Oḷahoregemba ubhaya sandēhadinda
guruśiṣyarendu nuḍidukoṇḍu naḍeyabēkāyitallade,
oḷa horagemba ubhaya sandēhavaḷidu
jīva paramarendemba ubhayavu
paramanobbanēyendu tiḷidare,
guruvē śiṣya; śiṣyanē guruvādudanēnembenayya
mahāliṅgaguru śivasid'dhēśvara prabhuvē.