Index   ವಚನ - 174    Search  
 
ದೇಹದೊಡನೆ ಪ್ರಾಣ ಹುಟ್ಟಿತ್ತಯ್ಯ. ಆ ದೇಹದೊಡನೆ ಮಿಶ್ರವಾದ ಪ್ರಾಣನು ಶ್ರೀಗುರುವಿನ ಕರಕಮಲದಲ್ಲಿ ಉತ್ಪತ್ತಿಯಾಗಿ, ಅಂಗದ ಮೇಲೆ ಲಿಂಗಸ್ವಾಯತವ ಮಾಡಿ ಉರುತರ ಲಿಂಗದಲ್ಲಿ ಭರಿತ ಚರಿತ ಚಾರಿತ್ರನ ಮಾಡಿದನಾಗಿ ಲಿಂಗದೇಹಿ ಲಿಂಗಪ್ರಾಣಿಯೆನಿಸಿಕೊಂಡು ಬದುಕಿದೆನಯ್ಯ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.