ಆದಿ ಆಧಾರದಲ್ಲಿ ವೇಧಿಸಿದ ಚಿದ್ಭಸ್ಮವ
ಭೇದಿಸಿ ಬಹಿಷ್ಕರಿಸಿ ಸರ್ವಾಂಗದಲ್ಲಿ ಧರಿಸಲು
ಭವ ಬಂಧನ ದುರಿತ ದೋಷಂಗಳು
ಪರಿಹರವಪ್ಪುದು ತಪ್ಪದು ನೋಡಾ.
ಇದು ಕಾರಣ ಅಡಿಗಡಿಗೆ ಶ್ರೀ ವಿಭೂತಿಯನೆ ಧರಿಸಿ
ಮಲತ್ರಯಂಗಳ ತೊಳೆದೆನು ನೋಡಾ.
ಮಲತ್ರಂಯಗಳು ಪರಿಹರವಾಗದ ಮುನ್ನ
ಭವ ಬಂಧನದ ಬೇರುಗಳ ಸಂಹರಿಸಿ
ಜನನ ಮರಣಂಗಳ ಒತ್ತಿ ಒರಸುವುದು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.