Index   ವಚನ - 186    Search  
 
ಸಕಲ ಕರಣಂಗಳನು ಬಕುತಿಯ ಜ್ವಾಲೆಯಲ್ಲಿ ಸುಟ್ಟು ಯುಕುತಿಯ ವಿಭೂತಿಯ ಧರಿಸಲು ಮುಕುತಿಯಹುದಕೆ ಸಂದೇಹವಿಲ್ಲ. ಇದು ಕಾರಣ ಶಿವ ಸಂಬಂಧವಾದ ಶ್ರೀ ವಿಭೂತಿಯನೊಲಿದು ಧರಿಸುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.