ಸದಾಚಾರದಲ್ಲಿ ನಡೆವವನ ಶಿವನಲ್ಲಿ ಭಕ್ತಿಯಾಗಿಪ್ಪವನ
ಶಿವಲಾಂಛನವ ಕಂಡಲ್ಲಿ ವಂದನೆಗೈವುತಿಪ್ಪವನ
ಲಿಂಗ ಜಂಗಮವ ಒಂದೇ ಭಾವದಲ್ಲಿ ಕಂಡು
ಭೃತ್ಯಾಚಾರ ಸದಾಚಾರಯುಕ್ತನಾಗಿರಬಲ್ಲರೆ
ಭಕ್ತನ ಸ್ಥಲವಿದೆಂಬೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Sadācāradalli naḍevavana śivanalli bhaktiyāgippavana
śivalān̄chanava kaṇḍalli vandanegaivutippavana
liṅga jaṅgamava ondē bhāvadalli kaṇḍu
bhr̥tyācāra sadācārayuktanāgiraballare
bhaktana sthalavidembenayya,
mahāliṅgaguru śivasid'dhēśvara prabhuvē.