Index   ವಚನ - 213    Search  
 
ಅರ್ಥಪ್ರಾಣಾಭಿಮಾನವನು ಗುರು ಲಿಂಗ ಜಂಗಮದ ಮುಖಕ್ಕೆ ಸಮರ್ಪಿಸಿ, ಆ ಗುರು ಲಿಂಗ ಜಂಗಮವೆ ತನು ಮನ ಪ್ರಾಣವಾಗಿರಬಲ್ಲರೆ, ಭಕ್ತನ ಸ್ಥಲವಿದೆಂಬೆನಯ್ಯ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.