Index   ವಚನ - 215    Search  
 
ಪ್ರಥಮದಲ್ಲಿ ಭಕ್ತರಾದೆನೆಂಬರು. ದ್ವಿತೀಯದಲ್ಲಿ ಮಾಹೇಶ್ವರಾದೆನೆಂಬರು. ತೃತೀಯದಲ್ಲಿ ಪ್ರಸಾದಿಯಾದೆನೆಂಬರು. ನಾಲ್ಕನೆಯಲ್ಲಿ ಪ್ರಾಣಲಿಂಗಿಯಾದೆನೆಂಬರು. ಐಯ್ದನೆಯಲ್ಲಿ ಶರಣನಾದೆನೆಂಬರು. ಆರನೆಯಲ್ಲಿ ಐಕ್ಯನಾದೆನೆಂಬರು. ಆರುಸ್ಥಲವ ಮೀರಿ ನಿರವಯಸ್ಥಲವನೆಯ್ದಿಹೆನೆಂಬರು. ಇದು ಖಂಡಿತ ಷಟ್‍ಸ್ಥಲಬ್ರಹ್ಮಜ್ಞಾನ ನಿರ್ಣಯವಲ್ಲ. ಆವಾವಸ್ಥಲವನಂಗಂಗೊಂಡರು ಆ ಸ್ಥಲದಲ್ಲಿ ಷಡ್ವಿಧ ಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲಡೆ ಸದ್ಭಕ್ತನೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.