Index   ವಚನ - 216    Search  
 
ಭಕ್ತಾದ್ಯೈಕ್ಯಾಂತವಹ ಷಡಂಗಕ್ಕೆ ಭಕ್ತನಂಗವೆ ಆದಿಯಾಗಿ ಆ ಭಕ್ತಂಗೆ ಪೃಥ್ವಿಯೆ ಅಂಗವಾಗಿ ಆ ಪೃಥ್ವಿಯ ಅಂಗವನುಳ್ಳ ಭಕ್ತನಲ್ಲಿಯೆ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನಪ್ಪ ಅಂಗಪಂಚಕವು ಗರ್ಭೀಕೃತವಾಗಿ ಆ ಭಕ್ತನಂಗದಲ್ಲಿಯೆ ಆಚಾರಲಿಂಗ ಸ್ವಾಯತವಾಗಿ ಆ ಆಚಾರಲಿಂಗದಲ್ಲಿಯೆ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಆಚಾರಲಿಂಗವೆ ಸರ್ವಕಾರಣವಾಗಿ ಇಂತೀ ಷಡ್ವಿಧ ಲಿಂಗದಲ್ಲಿಯೆ ಬೆರಸಿ ಬೇರಿಲ್ಲದಿರಬಲ್ಲರೆ ಭಕ್ತನೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.