Index   ವಚನ - 218    Search  
 
ಏನನೋದಿದರೇನಯ್ಯಾ? ಏನಕೇಳಿದರೇನಯ್ಯಾ? ಏನಹಾಡಿದರೇನಯ್ಯಾ? `ಓದಿ ಮರುಳಾದೆಯೋ ಕೂಚಿಭಟ್ಟ'ರೇ! ಎಂದು. ಗಿಣಿಯೋದಿ ತನ್ನ ಹೇಲ ತಾ ತಿಂದಂತೆ, ಏಕಲಿಂಗನಿಷ್ಠಾಚಾರ ಸ್ವಾನುಭವವಿವೇಕ ಸಿದ್ಧಾಂತ ನಿರ್ಣಯವಿಲ್ಲದೆ, ಮಾತಿಗೆ ಮಾತು ಕಲಿತು ನುಡಿಗೆ ನುಡಿಯ ಕಲಿತು ತರ್ಕಮರ್ಕಟರಂತೆ ಹೋರುವ ಬಯಲ ಸಂಭ್ರಮದ ತರ್ಕಿಗಳ ಕಂಡರೆ, ಮಾಗಿಯ ಕೋಗಿಲೆಯಂತೆ ಮುಖ ಮುನಿಸಾಗಿರಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.