ನವಿಲಾಡಿತೆಂದು ಕೆಂಬೋತ ಪಕ್ಕವ ತೆರಕೊಂಡಂತೆ
ಹುಲಿಯ ಬಣ್ಣಕ್ಕೆ ನರಿ ಮೈಯ ಸುಟ್ಟುಕೊಂಡಂತೆ
ಕೋಗಿಲೆ ಸ್ವರಗೈವುದೆಂದು ಕಾಗೆ ಕರೆದಂತೆ
ಲಿಂಗನಿಷ್ಠಾಂಗಿ ವಚನ ಹಾಡಿದರೆ ಒಪ್ಪುವನಲ್ಲದೆ
ನಿಷ್ಠೆಹೀನರು ಓದಿ ಹಾಡಿದರೆ
ನಳ್ಳಿಗುಳ್ಳೆಯ ತಿಂದ ನರಿ ಹಳ್ಳದ ತಡಿಯಲ್ಲಿ
ಬಳ್ಳಿಟ್ಟು ಬಗುಳಿದಂತೆ ಏನೆಂದು ಪಾಟಿ ಮಾಡರಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Navilāḍitendu kembōta pakkava terakoṇḍante
huliya baṇṇakke nari maiya suṭṭukoṇḍante
kōgile svaragaivudendu kāge karedante
liṅganiṣṭhāṅgi vacana hāḍidare oppuvanallade
niṣṭhehīnaru ōdi hāḍidare
naḷḷiguḷḷeya tinda nari haḷḷada taḍiyalli
baḷḷiṭṭu baguḷidante ēnendu pāṭi māḍarayya,
mahāliṅgaguru śivasid'dhēśvara prabhuvē.