ಕಾಯದ ಮೇಲೆ ಲಿಂಗವ ಧರಿಸಿ ದೇವಪೂಜೆಯ ಮಾಡಿ
ಕಾಯವಳಿದು ದೇವತಾ ಭೋಗವನೆಯಿದಿಹೆನೆಂಬ
ಗಾವಿಲರ ಎನಗೊಮ್ಮೆ ತೋರದಿರಯ್ಯ.
ಕಾಯವನು ಜೀವವನು ಲಿಂಗದಲ್ಲಿರಿಸಬಲ್ಲರೆ
ಮಹಾದೇವನೆಂದು ಬೇರುಂಟೇ?
ಆ ಮಹೇಶ್ವರಂಗೆ ನಮೋನಮೋಯೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Kāyada mēle liṅgava dharisi dēvapūjeya māḍi
kāyavaḷidu dēvatā bhōgavaneyidihenemba
gāvilara enagom'me tōradirayya.
Kāyavanu jīvavanu liṅgadallirisaballare
mahādēvanendu bēruṇṭē?
Ā mahēśvaraṅge namōnamōyembenu kāṇā,
mahāliṅgaguru śivasid'dhēśvara prabhuvē.