Index   ವಚನ - 226    Search  
 
ಪತಿಭಕ್ತೆಯಾದರೆ, ತನ್ನ ಪತಿಗೆ ಸರ್ವೋಪಚಾರಂಗಳ ಮಾಡಿ ಸಮಸ್ತ ಪದಾರ್ಥವನಾತಂಗೆ ನೀಡಿ ಆತನುಂಡು ಮಿಕ್ಕುದನುಂಬುದೇ ಪತಿವ್ರತಾಭಾವವೆಂಬ ಲೋಕದ ದೃಷ್ಟಾಂತದಂತೆ ಶರಣಸತಿ ಲಿಂಗಪತಿಯೆಂಬುದನು ಗುರೂಪದೇಶದಿಂದರಿದು ಆ ಗುರುವಚನಪ್ರಮಾಣಂಗಳಿಂದವೆ ಸಮಸ್ತ ಪದಾರ್ಥವ ತನ್ನ ಕರಸ್ಥಲದಲ್ಲಿರ್ಪ ಇಷ್ಟಲಿಂಗಕ್ಕೆ ಕೊಟ್ಟು ಕೊಂಬುದೆ ಆಚಾರ. ಇದು ಕಾರಣ, ಇಷ್ಟಲಿಂಗಕ್ಕೆ ಕೊಡದೆ ಅಂತರಂಗದಲ್ಲಿ ಪ್ರಾಣಲಿಂಗವುಂಟೆಂದು ಮನಕ್ಕೆ ಬಂದಂತೆ ತಿಂಬ ಶ್ವಾನಜ್ಞಾನಿಗಳಿಗೆ ನಾಯಕನರಕ ತಪ್ಪದು ಕಾಣ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.