Index   ವಚನ - 252    Search  
 
ಶರನಿಧಿ ರತ್ನವ ಧರಿಸಿದ್ದರೆ ಆ ಮಹಾನದಿಗೆ ಒಂದು ಬಡತನ ಉಂಟೇ ಅಯ್ಯ? ಮೇರುಗಿರಿಪರ್ವತ ಮೂಲಿಕೆಯ ಧರಿಸಿದ್ದರೆ ಆ ಮೇರು ಗಿರಿಪರ್ವತಕೆ ಒಂದು ಬಡತನ ಉಂಟೇ ಅಯ್ಯ? ಅನಾದಿಮಯ ಪರಿಪೂರ್ಣ ಲಿಂಗವು ಶರಣನಾಗಿ ಪ್ರವರ್ತಿಸಿತ್ತು. ಏತಕ್ಕಯ್ಯ ಎಂದರೆ; ತನ್ನ ಮಹಿಮಾಗುಣ ವೈಭವವ ಪ್ರಕಾಶಿಸ ತೋರಲಾಯಿತ್ತಯ್ಯ! ಶರಣ ಲಿಂಗವೆಂಬ ಅಂತರವೆಲ್ಲಿಯದೊ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ ಶರಣ ಲಿಂಗವೆಂಬಾತ ಕಾಣಿರೊ.