ಅನೃತ ಅನಾಚಾರ ಅನ್ಯಹಿಂಸೆ
ಪರಧನ ಪರಸ್ತ್ರೀ ಪರನಿಂದ್ಯವ ಬಿಟ್ಟು,
ಲಿಂಗನಿಷ್ಠೆಯಿಂದ ಶುದ್ಧಾತ್ಮಕನಾಗಿರಬಲ್ಲರೆ,
ಮಾಹೇಶ್ವರ ಸ್ಥಲವಿದೆಂಬೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Anr̥ta anācāra an'yahinse
paradhana parastrī paranindyava biṭṭu,
liṅganiṣṭheyinda śud'dhātmakanāgiraballare,
māhēśvara sthalavidembenayya,
mahāliṅgaguru śivasid'dhēśvara prabhuvē.