ಆಚಾರವಿಲ್ಲದ ಗುರು ಭೂತಪ್ರಾಣಿ. ಆಚಾರವಿಲ್ಲದ ಲಿಂಗ ಶಿಲೆ.
ಆಚಾರವಿಲ್ಲದ ಜಂಗಮ ಮಾನವ. ಆಚಾರವಿಲ್ಲದ ಪಾದೋದಕ ನೀರು.
ಆಚಾರವಿಲ್ಲದ ಪ್ರಸಾದ ಎಂಜಲು. ಆಚಾರವಿಲ್ಲದ ಭಕ್ತ ದುಃಕರ್ಮಿ.
ಇದು ಕಾರಣ,
ಅಟ್ಟವನೇರುವುದಕ್ಕೆ ನಿಚ್ಚಣಿಗೆಯೆ ಸೋಪಾನವಯ್ಯ.
ಹರಪದವನೆಯ್ದುವರೆ
ಶ್ರೀ ಗುರು ಹೇಳಿದ ಸದಾಚಾರವೆ ಸೋಪಾನವಯ್ಯ.
ಗುರುಪದೇಶವ ಮೀರಿ, ಮನಕ್ಕೆ ಬಂದಂತೆ ವರ್ತಿಸುವ ಪಾಪಿಗಳ
ಎನಗೊಮ್ಮೆ ತೋರದಿರಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Ācāravillada guru bhūtaprāṇi. Ācāravillada liṅga śile.
Ācāravillada jaṅgama mānava. Ācāravillada pādōdaka nīru.
Ācāravillada prasāda en̄jalu. Ācāravillada bhakta duḥkarmi.
Idu kāraṇa,
aṭṭavanēruvudakke niccaṇigeye sōpānavayya.
Harapadavaneyduvare
śrī guru hēḷida sadācārave sōpānavayya.
Gurupadēśava mīri, manakke bandante vartisuva pāpigaḷa
enagom'me tōradirayya,
mahāliṅgaguru śivasid'dhēśvara prabhuvē.