Index   ವಚನ - 275    Search  
 
ಕಣ್ಣಿನಲ್ಲಿ ಕಾಮ, ಮನದಲ್ಲಿ ಕ್ರೋಧ ಪ್ರಾಣದಲ್ಲಿ ಲೋಭ, ಬುದ್ಧಿಯಲ್ಲಿ ಮದ ವಿವೇಕದಲ್ಲಿ ಮತ್ಸರ ಅರುಹಿನಲ್ಲಿ ಮಾಯವುಳ್ಳನ್ನಕ್ಕರ ಎಂತು ಭಕ್ತನೆಂಬೆ? ಎಂತು ಮಾಹೇಶ್ವರನೆಂಬೆ? ಎಂತು ಪ್ರಸಾದಿಯೆಂಬೆ? ಎಂತು ಪ್ರಾಣಲಿಂಗಿಯೆಂಬೆ? ಎಂತು ಶರಣನೆಂಬೆ? ಎಂತು ಐಕ್ಯನೆಂಬೆ? ಎಂತು ಷಟ್ಸ್ಥಥಲದಲ್ಲಿ ಸಂಪೂರ್ಣನೆಂದೆಂಬೆ? ಎಂತು ಧ್ಯಾನಿಗಳೆಂಬೆ? ಎಂತು ಅನುಭಾವಿಗಳೆಂಬೆ? ವಾಕುಪೋಟಾರ್ಥಿಗಳು, ಉದರ ಘಾತಕರ ಎನಗೊಮ್ಮೆ ತೋರದಿರ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ