Index   ವಚನ - 284    Search  
 
ಕರ್ಕಸನ ಕಂಗಳೊಳಗೆ ರಾಕ್ಷಸರ ಪಡೆಯಿಪ್ಪುದ ಕಂಡೆನಯ್ಯ. ರಾಕ್ಷಸರ ಪಡೆಯೊಳಗೆ ಮುಕ್ಕಣ್ಣನುದಯವಾಗಲು ಕರ್ಕಸನ ಕಂಗಳು ಕೆಟ್ಟು ರಾಕ್ಷಸರ ಪಡೆ ಮುರಿದೋಡಿತ್ತು ನೋಡಾ! ಮುಕ್ಕಣ್ಣ ಶಿವನೊಲವ ನಾನೇನೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.