Index   ವಚನ - 286    Search  
 
ಡಂಬು ಮಚ್ಚರ್ಯಕ್ಕೆ ಇಂಬುಗೊಡದಿರಬಲ್ಲಡೆ ಶರಣ. ಶಂಭು ಪದಪದ್ಮ ಭಕ್ತಿನಂಬುಗೆವಿಡಿದು ಅಗಲದಿರಬಲ್ಲಡೆ ಶರಣ. ಸೂಸಲೀಯದೆ ಮನವ ಈಶ ಪದದಲ್ಲಿ ಮೀಸಲಾಗಿರಿಸಿಕೊಂಡಿರಬಲ್ಲಡೆ ಆ ಶರಣನ ಜಗದೀಶನೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.