Index   ವಚನ - 287    Search  
 
ನೆಲ ನೀರು ಕಿಚ್ಚು ಗಾಳಿ ಬಯಲು ಕೂಡಿ ಆದ ಪಿಂಡವ ತಾನೆಂದೆಂಬ ಮಿಥ್ಯಾ ಚರ್ಮದೇಹಿಗಳನೇನೆಂಬೆನಯ್ಯ? ನೆಲನಲ್ಲದ ನೀರಲ್ಲದ ಕಿಚ್ಚಲ್ಲದ ಗಾಳಿಯಲ್ಲದ ಬಯಲಲ್ಲದ ಪ್ರಕೃತಿಯಲ್ಲದ ಪುರುಷನಲ್ಲದ ಮೇಲಣ ಶುದ್ಧಸ್ವಯವೆ ತಾನೆಂದು ತಿಳಿದಾತನಲ್ಲದೆ ಶರಣನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.