Index   ವಚನ - 299    Search  
 
ನೇಮ ನೆಲಗತವಾಯಿತ್ತು. ಸೀಮೆ ನಿಸ್ಸೀಮೆಯಾಯಿತ್ತು ನೋಡಾ. ನೀರ ಕಿಚ್ಚು ನುಂಗಿ ಊರನಾವರಿಸಿತ್ತು ನೋಡಾ. ಊರು ಬೆಂದು ಉಲುಹಳಿದುಳಿದು ಸೀಮೆ ನಾಮವ ಮೀರಿ ತಾನು ಪರಾಪರನು ನೋಡಾ. ತನ್ನಿಂದನ್ಯವಾಗಿ ಇನ್ನೇನೂ ಇಲ್ಲ. ಅನ್ಯ ಅನನ್ಯವೆಂಬುದಳಿದುಳಿದು; ಅದ್ವೈತ ಪರವಸ್ತುವಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.