ಅಂಗದ ಮೇಲೊಂದು ಲಿಂಗವ ಕಂಡೆ;
ಲಿಂಗದ ಮೇಲೊಂದಂಗವ ಕಂಡೆನು ನೋಡಾ.
ಅಂಗವೆಂದರೆ ಆತ್ಮನು; ಲಿಂಗವೆಂದರೆ ಪರಮನು.
ಶಿವಜೀವರೊಂದಾದಲ್ಲಿ, ಪ್ರಾಣಾಪಾನ, ವ್ಯಾನ, ಉದಾನ, ಸಮಾನ,
ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ[ವೆ]ಂಬ
ದಶವಾಯುಗಳ ಗಮನಾಗಮನದ ವಿಷಯವ್ಯಾಪ್ತಿಯಡಗಿ
ಆತ್ಮಲಿಂಗಸಂಬಂಧಿಯಾಗಿರ್ದೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Aṅgada mēlondu liṅgava kaṇḍe;
liṅgada mēlondaṅgava kaṇḍenu nōḍā.
Aṅgavendare ātmanu; liṅgavendare paramanu.
Śivajīvarondādalli, prāṇāpāna, vyāna, udāna, samāna,
nāga, kūrma, kr̥kara, dēvadatta, dhanan̄jaya[ve]mba
daśavāyugaḷa gamanāgamanada viṣayavyāptiyaḍagi
ātmaliṅgasambandhiyāgirdenayya,
mahāliṅgaguru śivasid'dhēśvara prabhuvē.
ಸ್ಥಲ -
ಪ್ರಸಾದಿಯ ಪ್ರಾಣಲಿಂಗಿ