Index   ವಚನ - 322    Search  
 
ದೇವಸಾಲೆಯಲ್ಲಿ ದಿವ್ಯಮೂರ್ತಿಯ ಕಂಡೆನಯ್ಯಾ ದೇವಸಾಲೆಯು ಅಳಿವುದಲ್ಲ; ದಿವ್ಯಮೂರ್ತಿಯು ಕೆಡುವುದಲ್ಲ. ಕೇಡಿಲ್ಲದ ಪರವಸ್ತು ತಾನೆಂದರಿದಾತನಲ್ಲದೆ, ಶಿವಶರಣನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.