Index   ವಚನ - 327    Search  
 
ಆಚಾರ ಅನಾಚಾರವೆಂಬುದು ಇಲ್ಲ. ಸೀಮೆ ನಿಸ್ಸೀಮೆಯೆಂಬುದು ಇಲ್ಲ. ಗಮನ ನಿರ್ಗಮನವೆಂಬುದು ಇಲ್ಲವಯ್ಯ. ಕರ್ಮ-ಧರ್ಮ, ಸುಖ-ದುಃಖ, ಪುಣ್ಯ-ಪಾಪ ಭಯ-ನಿರ್ಭಯ, ಮೋಹ-ಮಾಯ, ಇಹ-ಪರವೆಂಬ ಉಭಯ ಸಂದೇಹವಿಲ್ಲವಯ್ಯ ಇವೇನೂ ಇಲ್ಲದ ಪರಮನಿರ್ವಾಣ ನಿರ್ವಯಲೆ ಶರಣ ಲಿಂಗ ಸಮರಸವಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.