ಪಂಚವಿಂಶತಿ ತತ್ವಶ್ರಯವೆಂಬ ಪಟ್ಟಣದೊಳಗೆ
ಆರು ಬಣ್ಣದ ಪಕ್ಷಿ ಮೂರು ಗೂಡ ಮಾಡಿಕೊಂಡು
ನಾಲ್ಕರಾಹಾರವ ಕೊಂಬುವುದ ಕಂಡೆನಯ್ಯ.
ಐದರ ನೀರ ಕುಡಿದು ಪರಿಣಾಮಿಸುತ್ತಿದೆ ನೋಡಾ.
ಏಳರ ಮೊಲೆಯನುಂಡು ಎಂಟರಾಭರಣವ ತೊಟ್ಟಿದೆ ನೋಡಾ.
ಹತ್ತರ ಬೆಂಬಳಿವಿಡಿದು ಒಂಬತ್ತು ಬಾಗಿಲೊಳಗೆ
ನಡೆದಾಡುವದ ಕಂಡೆನಯ್ಯ.
ಕೊಂಬುಕೊಂಬಿನಯಿಂಬಿನಲ್ಲಿ ಸುಳಿದಾಡುತ್ತಿದೆ ನೋಡಯ್ಯ.
ಆ ಸುಳುಹಿನ ಸೂಕ್ಷ್ಮವ ತಿಳಿದು
ತನ್ನ ಸುಳುಹನರಿವ ಹಿರಿಯರಾರನು ಕಾಣೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Pan̄cavinśati tatvaśrayavemba paṭṭaṇadoḷage
āru baṇṇada pakṣi mūru gūḍa māḍikoṇḍu
nālkarāhārava kombuvuda kaṇḍenayya.
Aidara nīra kuḍidu pariṇāmisuttide nōḍā.
Ēḷara moleyanuṇḍu eṇṭarābharaṇava toṭṭide nōḍā.
Hattara bembaḷiviḍidu ombattu bāgiloḷage
naḍedāḍuvada kaṇḍenayya.
Kombukombinayimbinalli suḷidāḍuttide nōḍayya.
Ā suḷuhina sūkṣmava tiḷidu
tanna suḷuhanariva hiriyarāranu kāṇenayya,
mahāliṅgaguru śivasid'dhēśvara prabhuvē.
ಸ್ಥಲ -
ಪ್ರಾಣಲಿಂಗಿಸ್ಥಲದ ವಚನ