Index   ವಚನ - 338    Search  
 
ಮಂಜರ ದೃಷ್ಟಿಯಲ್ಲಿ ತೋರುವ ಇಂದ್ರಿಯ ಭೋಗಂಗಳು ಮಹೇಂದ್ರಜಾಲವಾಗಿಪ್ಪುವು. ಇದು ಮನಸಿನ ವಿಕಾರವೆಂಬುದನೊಬ್ಬರು ತಿಳಿಯದೆ ತಬ್ಬಿಬ್ಬುಗೊಳುತ್ತಿದಾರೆ ನೋಡಾ ತ್ರೈಜಗವೆಲ್ಲ. ಮಂಜರ ದೃಷ್ಟಿಯಲ್ಲಿ ಚಂದ್ರಮನುದಯವಾಗಲು ಇಂದ್ರಿಯ ಭೋಗಂಗಳ ಮಹೇಂದ್ರಜಾಲವೆಲ್ಲ ಬೆಂದು ಹೋದವು ನೋಡಾ ಎನ್ನ ತಂದೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.