Index   ವಚನ - 362    Search  
 
ಇಷ್ಟಲಿಂಗ ಪ್ರಾಣಲಿಂಗವೆನುತಿಪ್ಪರು. ಇಷ್ಟಲಿಂಗ ಪ್ರಾಣಲಿಂಗದ ಸುದ್ಧಿಯನಾರುಬಲ್ಲರಯ್ಯ? ಇಷ್ಟಲಿಂಗವನರಿದರೆ ಅನಿಷ್ಟ ಪರಿಹಾರವಾಗಿರಬೇಕು ನೋಡಾ. ಪ್ರಾಣಲಿಂಗವನರಿದರೆ ಪ್ರಪಂಚು ನಾಸ್ತಿಯಾಗಿರಬೇಕು ನೋಡಾ. ಇಷ್ಟವು ಪ್ರಾಣವು ಒಂದೆಯೆಂದರಿದು ಒಡವೆರಸಿದ ಬಳಿಕ ಜಾಗ್ರ ಸ್ವಪ್ನ ಸುಷುಪ್ತಿಯೆಂಬ ತ್ರಿವಿಧಾವಸ್ಥೆಯಲ್ಲಿ ಲಿಂಗವಲ್ಲದೆ ಮತ್ತೇನು ತೋರಲಾಗದು ನೋಡಾ. ಆ ಮಹಾತ್ಮನು ಸರ್ವಾಂಗ ಪ್ರಾಣಲಿಂಗಮೂರ್ತಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.