Index   ವಚನ - 374    Search  
 
ಮೊಸಳೆಯ ಹಿಡಿದ ಮೊಣ್ಣ ಮಂಡಲದ ವಿಷಹತ್ತಿ ಜಗವೆಲ್ಲ ಮಸುಳಿಸಿ ಮರೆದೊರಗಿದುದ ಕಂಡೆನಯ್ಯ. ವಿಷದ ಹೊಗೆಯನು ಕೆಡಿಸಿ ಮೊಸಳೆಯ ಬಿಡಿಸಿಕೊಂಬ ಅಸಮಾನರನಾರನು ಕಾಣೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.