Index   ವಚನ - 375    Search  
 
ಕಾಳರಾತ್ರೆಯ ಮನೆಯ ಮಂಟಪದ ಕೋಣೆ ಕೋಣೆಗಳೊಳಗೆ ಏಳೆಂಟು ಕೋಣಗಳು ಹೂಣಿ ಹೊಡೆದಾಡುತ್ತಿವೆ ನೋಡಾ. ಭಾನುವಿನ ಉದಯಕ್ಕೆ ಕೋಣ ಸತ್ತುದ ಕಂಡು ಪ್ರಾಣವೇ ಲಿಂಗವಾಯಿತ್ತೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.