ಆಲಿಯ ಕೊನೆಯಲ್ಲಿ ಬೆಳೆದ ಹಾಲೆ
ಬಾಲೆಯರನೆ ಬಯಸುತ್ತಿಪ್ಪುದು ನೋಡಾ.
ಆಲಿಯ ಕೊನೆಯ ಹಾಲೆಯ ಹರಿದು
ಬಾಲೇಂದುಮೌಳಿ ತಾನಾದ ಲಿಂಗೈಕ್ಯವನೇನಹೇಳುವೆನಯ್ಯ?
ನೇತ್ರಕ್ಕೆ ಪ್ರತ್ಯಕ್ಷ ಘನಮಹಿಮ ತಾನಾದ ನಿಲವ ಚೆನ್ನಬಸವಣ್ಣ ಬಲ್ಲ.
ಚೆನ್ನಬಸವಣ್ಣನ ಪಾದಕ್ಕೆ ನಮೋ ನಮೋಯೆನುತಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Āliya koneyalli beḷeda hāle
bāleyarane bayasuttippudu nōḍā.
Āliya koneya hāleya haridu
bālēndumauḷi tānāda liṅgaikyavanēnahēḷuvenayya?
Nētrakke pratyakṣa ghanamahima tānāda nilava cennabasavaṇṇa balla.
Cennabasavaṇṇana pādakke namō namōyenutirdenu kāṇā,
mahāliṅgaguru śivasid'dhēśvara prabhuvē.
ಸ್ಥಲ -
ಪ್ರಾಣಲಿಂಗಿಸ್ಥಲದ ವಚನ