Index   ವಚನ - 399    Search  
 
ಜೇನುತುಪ್ಪದಲ್ಲಿ ಬಿದ್ದು ಸಾವ ನೊಣನಂತೆ, ಕೀಳುಮಾಂಸದ ಸವಿಗೆ, ಗಂಟಲಗಾಣದಲ್ಲಿ ಸಿಕ್ಕಿ ಸಾವ ಮೀನಿನಂತೆ, ಹೀನವಿಷಯಕ್ಕೆ ನಚ್ಚಿ ಮಚ್ಚದಿರಾ ಎಲೆಲೆ ಹುಚ್ಚ ಮನವೇ. ಅಲ್ಪಸುಖಕ್ಕೆ ಮಚ್ಚಿ, ಅನಂತ ಭವಭಾರಕ್ಕೊಳಗಾಗಿ ದುರ್ಗತಿಗಿಳಿಯದಿರಯ್ಯ ಬೆಂದ ಮನವೇ. ಹರಹರಾ ಶಿವಶಿವಾಯೆಂಬುವದ ಮರೆಯದಿರು; ಮರೆದೊರಗದಿರು. ನಾಯ ಸಾವ ಸಾವೆ ಕಂಡಾ ಎಲೆಲೆ ಮನವೇ. ಈ ಮರುಳುತನವ ಬಿಟ್ಟು ಎನ್ನೊಡೆಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿಗೆ ಶರಣು ಶರಣೆನ್ನಕಲಿಯಾ ಸುಖಿಯಾಗಬಲ್ಲರೆಲೆ[ಲೆ] ಮನವೇ.