Index   ವಚನ - 400    Search  
 
ಬೂದಿಯಲ್ಲಿ ಹೊರಳುವ ಕತ್ತೆಯಂತೆ, ಎಲುವ ಕಡಿವ ಶ್ವಾನನಂತೆ, ಹಾತೆಯ ತಿಂಬ ಹಲ್ಲಿಯಂತೆ, ಕಿಚ್ಚ ಹಾಯಿವವಳಂತೆ ಒಚ್ಚಿ ಹೊತ್ತಿನ ಭೋಗಕ್ಕೆ ಮಚ್ಚಿ ಹುಚ್ಚಾದಿರಿಯಲ್ಲ! ಮೃತ್ಯುಂಜಯನನಪ್ಪದೆ ಮೃತ್ಯುವಿನ ಬಾಯತುತ್ತಾದವರ ಕಂಡು ನಗುತ್ತಿದ್ದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.