Index   ವಚನ - 413    Search  
 
ಇನ್ನಿವಕ್ಕೆ ಅರ್ಪಿತಮುಖಂಗಳ ಹೇಳಿಹೆನು: ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಈ ಐದು ಲಿಂಗವೂ ಆಚಾರಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ. ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ ಈ ಐದು ಲಿಂಗವು ಗುರುಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ. ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ ಗುರುಲಿಂಗ- ಈ ಐದು ಲಿಂಗವು ಶಿವಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ. ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ- ಈ ಐದು ಲಿಂಗವು ಜಂಗಮಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ. ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ- ಈ ಐದು ಲಿಂಗವು ಪ್ರಸಾದಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ. ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ- ಈ ಐದು ಲಿಂಗವು ಮಹಾಲಿಂಗಕ್ಕೆ ಮುಖವೆಂದರಿಯಲುಬೇಕಯ್ಯ. ಹೀಂಗೆ ಅಂಗಮುಖಂಗಳಲ್ಲಿಯೂ ಲಿಂಗವೇ ಮುಖವಾಗಿಪ್ಪ ಭೇದವನರಿಯಲುಬೇಕಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.