ಭೂಮಿಯ ಮೇಲೆ ಹುಟ್ಟಿದ ಕಲ್ಲ ತಂದು
ಭೂತದೇಹಿಗಳ ಕೈಯಲ್ಲಿ ಕೊಟ್ಟು
ಕೊಟ್ಟ ಕೂಲಿಯ ತಕ್ಕೊಂಡು, ಹೊಟ್ಟೆಯ ಹೊರೆವ ಭ್ರಷ್ಟರಿಗೆ
ಪ್ರಸಾದವೆಲ್ಲಿಯದೋ?
`ನಾದಂ ಲಿಂಗಮಿತಿ ಜ್ಞೇಯಂ| ಬಿಂದು ಪೀಠಮುದಾಹೃತಂ||
ನಾದ ಬಿಂದುಯುತಂ ರೂಪಂ| ಲಿಂಗಾಕಾರಮಿಹೋಚ್ಯತೇ||'
ಎಂದುದಾಗಿ ಇಷ್ಟಲಿಂಗದಾದಿಯನಿವರೆತ್ತ ಬಲ್ಲರು?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.