Index   ವಚನ - 422    Search  
 
ಅದ್ವೈತವ ನುಡಿವ ಬದ್ಧಭವಿಗಳಿರಾ ಮನದ ಕ್ಷುದ್ರವಡಗದು ಕಾಣಿ ಭೋ. ತತ್ವಾರ್ಥವ ನುಡಿವ ವ್ಯರ್ಥಕಾಯರುಗಳಿರಾ ವಿಕಾರದ ಕತ್ತಲೆ ಹರಿಯದು ಕಾಣಿ ಭೋ. ಶಿವಾನುಭಾವ ನಿಮಗೇಕೆ? ಸತ್ತ ಹಾಂಗಿರಿ ಭೋ. ತತ್ವವತ್ತಲೆಯಾಗಿ ನೀವಿತ್ತಲೆಯಾಗಿ ಮೃತ್ಯುವಿನ ಬಾಯ ತುತ್ತಾದಿರಲ್ಲಾ. ತತ್ವವಿತ್ತುಗಳು ವೃಥಾ ಸತ್ತುದ ಕಂಡು ಮೃತ್ಯುಂಜಯನ ಶರಣರು ನಗುತಿಪ್ಪರು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.