Index   ವಚನ - 423    Search  
 
ಗಾಳಿ ಬೀಸುವನ್ನಕ್ಕರ ಮರನುಲಿಯದೆ ಮಾಣದಯ್ಯ. ಕಾಯುವುಳ್ಳನ್ನಕ್ಕರೆ ವಿಕಾರ ಸಾಯದು ನೋಡಾ. ಭಾವವುಳ್ಳನ್ನಕ್ಕರ ಭ್ರಮೆ ಅಡಗದಯ್ಯ. ಮನವುಳ್ಳನ್ನಕ್ಕರ ಮಾಯೆ ಮಾಣದಯ್ಯ. ಮಾಯವುಳ್ಳನ್ನಕ್ಕರ ಸಾವು ಮಾಣ್ಬುದೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.