Index   ವಚನ - 425    Search  
 
ನಡುವಳ ಮಂಟಪದಲ್ಲಿ ಮೃಡಮೂರ್ತಿಯ ಕಂಡೆನಯ್ಯ. ಮೃಡನ ಗಡಣೆಯಲ್ಲಿ ಜಗವೆಲ್ಲ ಅಡಗಿ ಉಡುಗಿದೆ ನೋಡಾ! ಈ ಒಡೆಯನ ಮಹಿಮೆಯನೇನೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.