Index   ವಚನ - 424    Search  
 
ಮುಂದಳ ಮುಖಸಾಲೆಯೊಳಗೆ ಉದ್ದಂಡಮೂರ್ತಿಯ ಕಂಡೆನಯ್ಯ. ಲಂಡರ ಪುಂಡರ ಭಂಡರ ದಂಡಿಸುತ್ತಿದಾನೆ ನೋಡಾ! ಮುಂದಣ ಮುಖಸಾಲೆಯ ಮುರಿದು ಉದ್ದಂಡಮೂರ್ತಿ ಉಳಿದ ಪ್ರಚಂಡತೆಯನೇನೆಂಬೆನಯ್ಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.