ರವಿಯ ಮಂಡಲದಲ್ಲಿ
ಶಶಿಯ ಮೇಘದ ಸೋನೆ ಸುರಿವುತ್ತಿದೆ.
ಅಗ್ನಿವರ್ಣದ ಬೀಜದಲ್ಲಿ
ಐದುವರ್ಣದ ವೃಕ್ಷ ಹುಟ್ಟಿತ್ತು ನೋಡಿರೇ.
ಆ ವೃಕ್ಷ ನಾನಾರೂಪಿನ ಫಲ ಪ್ರಜ್ವಲಿಸುತ್ತಿದೆ ನೋಡಾ.
ನಾನಾರೂಪಿನ ಪ್ರಜ್ವಲಾಕಾರ ಏನು ಏನೂ ಇಲ್ಲದ ಠಾವಿನಲ್ಲಿ
ವಿಶ್ರಾಂತಿಯನೆಯ್ದಿರೆ.
ನಾನು ಸ್ವಯಂಭುವಾದೆನು ಕಾಣಾ.
ಏನು ಏನೂ ಇಲ್ಲದ ನಿರಾಳ ನೀನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.