Index   ವಚನ - 441    Search  
 
ತಲೆಯಲ್ಲಿ ಹುಟ್ಟಿದ ಕಣ್ಣು ನೆಲದೊಡೆಯನ ನುಂಗಿತ್ತು ನೋಡಾ. ತಲೆಯಳಿಯಿತ್ತು: ನೆಲ ಬೆಂದಿತ್ತು. ತಲೆಯೊಳಗಣ ಕಣ್ಣು ತ್ರಿಜಗದಾಧಿಪತಿಯ ತಾನೆಂದು ನೋಡುತ್ತ ನೋಡುತ್ತ ಅಡಗಲು ನೆಲದೊಡೆಯ ಸತ್ತುದ ಕಂಡು ನಿರ್ವಯಲ ಸಮಾಧಿಸ್ಥಲವಾಗಿ ಕುರುಹಳಿದ ಲಿಂಗೈಕ್ಯನಯೇನೆಂದುಪಮಿಸುವೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.