Index   ವಚನ - 442    Search  
 
ಐದು ಬಣ್ಣದ ಗಿಡುವಿಂಗೆ ಇಪ್ಪತ್ತೈದು ಕೊನೆ ನೋಡಾ. ಅಲ್ಲಿ ಸುತ್ತಿಯಾಡುವತನೊಬ್ಬನೆ ನೋಡಾ. ಐದು ಬಣ್ಣವಳಿದು ಇಪ್ಪತ್ತೈದು ಶಾಖೆ ಮುರಿಯಲು ಅಲ್ಲಿ ಆಡುವಾತ ಸತ್ತು ಕೋಳುಹೋಯಿತ್ತು; ನಿಮ್ಮವರಿಗೆ ನಿತ್ಯನಿಜಲಿಂಗೈಕ್ಯ ಸಾಮ್ರಾಜ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.