ಸಪ್ತದ್ವೀಪದ ಮಧ್ಯದಲ್ಲಿ
ಇಪ್ಪತ್ತೈದು ಕೊನೆಯ ವೃಕ್ಷವ ಕಂಡೆನಯ್ಯ.
ಎಂಟರಾದಿಯಲ್ಲಿ ನಿಂದು ಏಳರ ನೀರನಲ್ಲಿ ಬೆಳೆದು
ಆರರ ಭ್ರಮೆಯಲ್ಲಿ ಮುಳುಗಿ ಮೂಡುತ್ತಿಹುದು.
ಹತ್ತರ ಹಾದಿಯಲ್ಲಿ ಹರಿದು ಹಬ್ಬಿ ಕೊಬ್ಬುವುದಯ್ಯ.
ಎಲೆ ಹೂವು ಫಲವು ಹಲವಾಗಿಪ್ಪುದಯ್ಯ.
ಸಪ್ತದ್ವೀಪವೂ ಅಲ್ಲ;
ಇಪ್ಪತ್ತೈದು ಕೊನೆಯೂ ಅಲ್ಲ;
ಎಂಟಲ್ಲ, ಏಳಲ್ಲ, ಆರರ ಭ್ರಮೆಯಲ್ಲ;
ಹತ್ತರ ಹಾದಿಯಲ್ಲಿ ಹರಿದು ಹಬ್ಬಿ ಕೊಬ್ಬುವುದಿಲ್ಲ;
ಎಲೆ ಹೂವು ಫಲವು ಹಲವಾಗಿ ತೋರುವ ತೋರಿಕೆ ತಾನಲ್ಲವೆಂದು
ನಡುವಣ ವೃಕ್ಷದ ನೆಲೆಯ ನಿರ್ಣಯವ ತಿಳಿದಾತನಲ್ಲದೆ
ಸಲೆ ಶಿವಶರಣನಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Saptadvīpada madhyadalli
ippattaidu koneya vr̥kṣava kaṇḍenayya.
Eṇṭarādiyalli nindu ēḷara nīranalli beḷedu
ārara bhrameyalli muḷugi mūḍuttihudu.
Hattara hādiyalli haridu habbi kobbuvudayya.
Ele hūvu phalavu halavāgippudayya.
Saptadvīpavū alla;
ippattaidu koneyū alla;
eṇṭalla, ēḷalla, ārara bhrameyalla;
hattara hādiyalli haridu habbi kobbuvudilla;
ele hūvu phalavu halavāgi tōruva tōrike tānallavendu
naḍuvaṇa vr̥kṣada neleya nirṇayava tiḷidātanallade
sale śivaśaraṇanalla kāṇā,
mahāliṅgaguru śivasid'dhēśvara prabhuvē.