Index   ವಚನ - 447    Search  
 
ಧರೆಯ ಮೇಲಣ ಅರೆಯಲ್ಲಿ ಮೇರುಗಿರಿ ಹುಟ್ಟಿದುದ ಕಂಡೆನಯ್ಯ. ಗಿರಿಯ ಸನ್ನಿಧಿಯಲ್ಲಿ ವಜ್ರ ಉದಯಿಸಲು ಗಿರಿ ಕರಗಿ ಅರೆವೊಡೆದು, ಧರೆ ಬೆಂದು ಕಾಲಾಗ್ನಿ ಎದ್ದು ಉರಿವುತ್ತಿದೆ ನೋಡಾ. ಆ ಉರಿಯೇ ವಜ್ರದ ಪ್ರಭೆಯೆಂದೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.